ಗುಬ್ಬಚ್ಚಿ ಗಳ ಹಾಡು

ಕನ್ನಡ ಬಳಗದ ಗುಬ್ಬಚ್ಚಿಗಳು ನಾವು

ಚಿಂವ್ ಚಿಂವ್ ಎಂದು ಉಲಿಯುವೆವು

ಒಲವಿನ ಭಾಷೆಯನಾಡುತ ನಾವು

ಎಲ್ಲರ ಕೂಡಿ ನಲಿಯುವೆವು  ||೧||

ಅಮ್ಮನು ನಮ್ಮನು ಹರಸುವ ಭಾಷೆ

ಅಪ್ಪನ ಜೊತೆ ಒಡನಾಟದ ಭಾಷೆ

ಗೆಳೆಯರ ಕೂಡಿ ನಲಿದಾಡುವ ಭಾಷೆ

ಆಹಾ! ಎಂಥಹ ಸುಂದರ ಭಾಷೆ  ||೨||

ಅಂದದ ಪದಗಳ ಚಂದದ ಭಾಷೆ

ಎಲ್ಲರ ಹೃದಯವ ಗೆಲ್ಲುವ ಭಾಷೆ

ಗಂಧದ ನಾಡಿನ ಚಂದನ ಭಾಷೆ

ಆಹಾ! ಎಂಥಹ ಸುಂದರ ಭಾಷೆ     ||೩||

ಕಲಿಯುತ ಬಳಸುತ ಬೆಳೆಯುವೆವು

ನಾಡಿನ ಸಂಸ್ಕೃತಿ ಬೆಳೆಸುವೆವು

ದೇಶ-ವಿದೇಶದಿ ಭಾಷೆಯ ಕಂಪನು

ಎಲ್ಲರೂ ಸೇರಿ ಹರಡುವೆವು  ||೪||

ಲೇ: ಸುಧೀರ್ ಶಿವರಾಂ

Videos:Click HERE


​Please contact CKBEducationDirector@gmail.com for registering your child with Carolina Kannada Balaga Aata Patha Shale.


You can also reach us on +1 980 636 3268 (Sudheer Shivram)